ಸಪ್ತ ಸ್ವರಗಳು

"ಓಂ-ಕಾರ", "ಸಪ್ತ ಸ್ವರಗಳು" ಮತ್ತು "ಕನ್ನಡ ಅಕ್ಷರ ಮಾಲೆ"


ಓಂ-ಕಾರವನ್ನು ನಾದ ಬ್ರಹ್ಮವೆಂದು ಸೃಷ್ಠಿ ಮೂಲವೆಂದು ನಾವೆಲ್ಲರು ಕೇಳಿದ್ದೇವೆ.
ಆಧುನಿಕ ವಿಜ್ಞಾನದ ಪ್ರಕಾರವೂ ನಮ್ಮೆದುರು ಕಾಣುವ ಈ ವಿಶ್ವವೆಲ್ಲಾ ಆದಿಮೂಲದಲ್ಲಿ ಒಂದು ಪುಟಾಣಿ ಬಿಂದುವಿನ ಸ್ವರೂಪದಲ್ಲಿದ್ದು (ಸಿಂಗುಲಾರ್ ಪಾಯಿಂಟ್) ಇದ್ದಕ್ಕಿದ್ದಂತೆ ದೊಡ್ಡ ನಾದದೊಡನೆ ಸ್ಫೋಟಗೊಂಡು ಶುರುವಾಯಿತು ಎಂದು ಹೇಳುತ್ತದೆ. ಇದನ್ನು ಅವರು "ಬಿಗ್ ಬ್ಯಾಂಗ್ ಥಿಯರಿ" ಎಂದು ಕರೆದಿದ್ದಾರೆ.
ಸೃಷ್ಟಿ ಮೊದಲುಗೊಂಡ ಆ ನಾದವೇ ಬ್ರಹ್ಮಾಂಡದ ಮೂಲ ಅಥವಾ ನಾದಬ್ರಹ್ಮ.
ಈ ಓಂ-ಕಾರ ಸೃಷ್ಠಿ ಮೂಲ (ಓಂ-ಕಾರ ಸ್ವರೂಪಿ ಬ್ರಹ್ಮ) ಹೌದೋ ಇಲ್ಲವೋ ಎನ್ನುವುದಕ್ಕಿಂತ ಅದು ಸದ್ಯಕ್ಕಂತು ಹಿಂದುಮತದ ಕೇಂದ್ರಬಿಂದುವಾಗಿ ಉಳಿದುಬಿಟ್ಟಿದೇ ಅಷ್ಟೇ.
ಓಂ-ಕಾರ ಸೃಷ್ಠಿ ಮೂಲವೇನೊ ಸರಿ ಅದು ಸ್ವರಮೂಲವು (ಸ್ವರಗಳ+ವ್ಯಂಜನಗಳ ಮೂಲ) ಕೂಡ.
ಸಂಸ್ಕೃತದ ಪ್ರಕಾರ ಓಂ-ಕಾರ "ಅ"+"ಉ"+"ಮ್" ಕಾರಗಳ ಸಂಗಮ.
ಇವು ಮೂರು ಸ್ವರಗಳು ಶಬ್ದದ/ಸದ್ದಿನ ಅಥವಾ ನಮ್ಮೆಲ್ಲ ಮಾತುಗಳ ಮೂಲ.
ಈಚಿನ ದಿನಗಳಲ್ಲಿ ಸದ್ದು ಗದ್ದಲಗಳ ಮೂಲವು ಕೂಡ :)
ನಾದ->ಶಬ್ದ->ಸ್ವರ->ನುಡಿ->ಮಾತು->ಅಕ್ಷರಗಳು->ಬರಹ
ಇನ್ನು ಹಿತಮಿತವಾಗಿ ಹೇಳಬೇಕೆಂದರೆ,
ಓಂ -> ಅ + ಉ + ಮ್ -> ಅಕ್ಷರ ಮಾಲೆ?
ಇದೇನಿದು ಈ ಮೂರು ಸ್ವರಗಳಿಂದ ನೂರಾರು ಅಕ್ಷರಗಳೇ!!!
ಇದನ್ನು ಸಾಧಿಸೋ ಮೊದಲು ಸಪ್ತಸ್ವರಗಳಿಗೆ ಹೆಜ್ಜೆ ಹಾಕೋಣ?
ಇದೇನಪ್ಪ ಇವನು ನಾದಬ್ರಹ್ಮನಿಂದ ನಾದದೇವತೆ ಹತ್ತಿರಕ್ಕೆ ಬಂದ ಅಂತೀರ?
ನನಗೇನೂ ನಿಮಗೆ ಸಂಗೀತ ಕಲಿಸಿಕೊಡಬೇಕು ಅನ್ನೊ ವಿಚಾರ ಇಲ್ಲ.
ಆದರೆ, ಇಲ್ಲಿ ಯಾರು ಸಾಮಾನ್ಯವಾಗಿ ಗಮನಿಸದ ಒಂದು ಅಂಶ ಇದೆ.
ಕನ್ನಡ ಪಠ್ಯ ಪುಸ್ತಕದ ಪ್ರಕಾರ ಸ್ವರಗಳು "ಇ" "ಎ" "ಉ" "ಒ" "ಅ" ಅಲ್ಲವೇ?
ಸಂಗೀತ ಶಾಸ್ತ್ರದ ಈ ಸಪ್ತ ಸ್ವರಗಳಾದ "ಸ", "ರಿ", "ಗ", ಮ", "ಪ", "ದ", "ನಿ",
ಕನ್ನಡ ಪಠ್ಯ ಪುಸ್ತಕದ ಪ್ರಕಾರ ಎಲ್ಲವೂ ವ್ಯಂಜನ ಅಕ್ಷರಗಳೇ!!!
ನನಗೋ ಈ ಸಂಗೀತ ಶಾಸ್ತ್ರ ಪಂಡಿತರು ಏಳು ಸ್ವರಗಳನ್ನು ಬಿಂಬಿಸಲಿಕ್ಕೆ,
ಈ ಏಳು ವ್ಯಂಜನ ಅಕ್ಷರಗಳನ್ನು ಯಾಕೆ ಬಳಸಿದರು ಅನ್ನುವುದೇ ಸೋಜಿಗದ ವಿಷಯ ಅನ್ನಿಸುತ್ತದೆ.
ಬಹುಃಶ ಕಾಲಾನುಗಟ್ಟಲೆ ಕಾಲ ಜರುಗುತ್ತಿದ್ದಂತೆ ಇದರ ಜ್ಞಾನ/ಜಾಣ್ಮೆ ಮಾಸಿ ಹೋಗಿದೆಯೋ ಏನೋ!!!
ಈ ವಿಚಾರದ ಹಾದಿಯಲ್ಲಿ ಈ ಸಪ್ತ-ಸ್ವರಗಳನ್ನು (ಸಪ್ತ ವ್ಯಂಜನಗಳನ್ನು) ಎಳೆ-ಎಳೆಯಾಗಿ ಬಿಡಿಸಿ ಪರಿಶೀಲಿಸಬೇಕು.
ಅದೇನೆ ಇರಲಿ, ಸದ್ಯಕ್ಕೆ ಇಲ್ಲಿ ಇದರಬಗ್ಗೆ ಒಂದಿಷ್ಟು ಮಿತವಾಗಿ ತಿಳಿದುಕೊಳ್ಳೋಣ.
ಹೇಗೆ "ಸ", "ರಿ", "ಗ", ಮ", "ಪ", "ದ", "ನಿ", ಅನ್ನೊ ಈ ಏಳು ಅಕ್ಷರಗಳು ಸಂಗೀತದಲ್ಲಿ ಸ್ವರಗಳನ್ನು ಬಿಂಬಿಸುತ್ತವೊ ಹಾಗೆಯೇ ಇವೇ ಅಕ್ಷರಗಳು ಗದ್ಯ/ಪಠ್ಯದಲ್ಲಿ ಎಲ್ಲ ವ್ಯಂಜನ ಅಕ್ಷರಗಳನ್ನು ಅಂದರೆ, {"ಸ್", "ರ್", "ಗ್", ಮ್", "ಪ್", "ದ್", "ನ್" } ಅನ್ನು ಪ್ರತಿನಿಧಿಸುತ್ತಿವೆ.
ಉದಾಹರಣೆಗೆ,
"ಸ" ಅಕ್ಷರ -> {"ಚ", "ಜ", "ಶ", "ಷ" "ಜ಼", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ರಿ" ಅಕ್ಷರ -> {"ರ", "ಲ", "ಳ", "ೞ", "ಋ"... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಗ" ಅಕ್ಷರ -> {"ಗ", "ಕ", "ಘ", "ಕ್ಷ", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಮ" ಅಕ್ಷರ -> {"ಮ", "ಅಂ" ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಪ" ಅಕ್ಷರ -> {"ಪ", "ಬ", "ವ", "ಫ಼", ... ಇತರೆ } ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ದ" ಅಕ್ಷರ -> {"ತ", "ದ", "ಟ", "ಡ", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ನಿ" ಅಕ್ಷರ -> {"ನ", "ಣ" "ಞ", ... ಇತರ್} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
ಈಗ, ಸ್ವರಗಳ ಬಗ್ಗೆ ಒಂದಿಷ್ಟು ಮಾತಾಡೋಣ.
ನಾವೆಲ್ಲ ಕನ್ನಡದಲ್ಲಿ (ಆಡುನುಡಿಯಲ್ಲಿ) ಹತ್ತು ಸ್ವರಗಳನ್ನು ಬಳಸುತ್ತೇವೆ.
{"ಇ" "ಎ" "ಉ" "ಒ" "ಅ"} = ಗಿಡ್ಡ ಸ್ವರಗಳು/ಹ್ರಸ್ವ ಸ್ವರಗಳು.
{"ಈ" "ಏ" "ಊ" "ಓ" "ಆ"} = ಉದ್ದ ಸ್ವರಗಳು/ದೀರ್ಘ ಸ್ವರಗಳು (ಮೇಲಿನ ಸ್ವರಗಳ ಉದ್ದನೆಯ ರೂಪ).
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಬರಿ ಐದು ಸ್ವರಗಳಷ್ಟೇ ಇವೆ.
ಆದರೆ, "ಎ" ಅಕ್ಷರ ವ್ಯಾಕರಣಿಗಳ ಪ್ರಕಾರ "ಅ" ಮತ್ತು "ಇ" ಸ್ವರಗಳು ಬೆರೆತು ಬರುವಂತಹದು.
ಅದೇ ರೀತಿ, "ಒ" ಅಕ್ಷರ ವ್ಯಾಕರಣಿಗಳ ಪ್ರಕಾರ "ಅ" ಮತ್ತು "ಉ" ಸ್ವರಗಳ ಬೆರೆತು ಬರುವಂತಹದು.
ಒಟ್ಟಾರೆ ಹೇಳಬೇಕೆಂದರೆ,
ಎಲ್ಲಾ ಸ್ವರ ಅಕ್ಷರಗಳು ಈ ಮೂರು {"ಇ", "ಉ", "ಅ"} ಅಕ್ಷರಗಳ ಪ್ರತಿರೂಪವೇ.
ಎಲ್ಲಾ ವ್ಯಂಜನ ಅಕ್ಷರಗಳು ಒಟ್ಟು ಏಳು {"ಸ್", "ರ್", "ಗ್", ಮ್", "ಪ್", "ದ್", "ನ್" } ಅಕ್ಷರಗಳ ಪ್ರತಿರೂಪವೇ.
ಇದರ ಅರ್ಥ, ಯಾವುದೇ ಒಂದು ಭಾಷೆಯನ್ನು ಸರಿಯಾಗಿ ಬಳಸಲು
ಕೆಲವು (ಕನಿಷ್ಟ ಏಳು) ವ್ಯಂಜನಗಳು ಮತ್ತು ಕೆಲವು (ಕನಿಷ್ಟ ಮೂರು) ಸ್ವರಗಳು ಬೇಕೆಬೇಕು.
ಇಲ್ಲಾವಾದಲ್ಲಿ ಆ ಭಾಷೆ ಆಡು ಮಾತಗದೆ, ಶಬ್ದವಾಗಿ ಉಳಿದುಬಿಡುತ್ತದೆ.
ಇನ್ನೊಂದು ರೀತಿ ಹೇಳಬೇಕೆಂದರೆ,
ಯಾವುದೇ ಭಾಷೆ/ನುಡಿ ಒಟ್ಟು ಈ ಮೇಲೆ ತಿಳಿಸಿದ ಕನಿಷ್ಟ (ಮಿನಿಮಮ್) ಏಳು ವ್ಯಂಜನ ಅಕ್ಷರಗಳಿಲ್ಲದೆ ಮತ್ತು
ಕನಿಷ್ಟ (ಮಿನಿಮಮ್) ಮೂರು ಸ್ವರ ಅಕ್ಷರಗಳಿಲ್ಲದೆ ಪೂರ್ಣವಲ್ಲ.
{"ಸ", "ರಿ", "ಗ", ಮ", "ಪ", "ದ", "ನಿ"}/{"ಸ್", "ರ್", "ಗ್", ಮ್", "ಪ್", "ದ್", "ನ್" } ಏಳು ವ್ಯಂಜನಗಳನ್ನು ಬಿಂಬಿಸುವುದಾದರೆ, {"ಇ", "ಉ", "ಅ"} ಮೂರು ಸ್ವರಗಳನ್ನು ಬಿಂಬಿಸುತ್ತವೆ.
ನಾದ->ಸ್ವರ->ಅಕ್ಷರಗಳು->ಭಾಷೆ
ಅಥವಾ...
ಓಂ -> (ಅ + ಉ + ಮ್) -> (ಅ ಇ ಉ) + (ಸ್ ರ್ ಗ್ ಮ್ ಪ್ ದ್ ನ್) -> ಭಾಷೆ (ಕನ್ನಡ).
ಈ ಹಿನ್ನಲೆಯಲ್ಲಿ ಕನ್ನಡ(ಆಡು ನುಡಿಯ) ಅಕ್ಷರಗಳನ್ನು ನೋಡಿದಾಗ,
ಸ್ವರಗಳು...
ಇ ಎ ಉ ಒ ಅ
ಈ ಏ ಊ ಓ ಆ
ವ್ಯಂಜನಗಳು...
ಕ ಚ ಟ ತ ಪ
ಗ ಜ ಡ ದ ಬ
ಯ ರ ಲ ವ ಸ ಶ ಹ ಳ
ನ ಮ ಣ ಂ